
BANASHANKARI CBSE SCHOOL
NIDAGUNDI
CBSE Affiliation No: 831750
Affiliated to CBSE, New Delhi
Nidagundi, Vijayapura, Karnataka
Our Chairman
Satish S Patil

ಆತ್ಮೀಯ ಪಾಲಕರೆ,
ನಮ್ಮ ಸಂಸ್ಥೆಯು ನಿಡಗುಂದಿಯಲ್ಲಿ ಕೌಶಲ್ಯ ತರಬೇತಿಯನ್ನು ಪ್ರಾರಂಭ ಮಾಡಿ ೨೦೨೪-೨೫ನೆ ರ‍್ಷಕ್ಕೆ ೨೫ ವಸಂತಗಳನ್ನು ಪೂರೈಸುತ್ತಿದೆ ಎಂದು ತಿಳಿಸಲು ಸಂತೋಷವೆನಿಸುತ್ತದೆ. ನಮ್ಮ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲಿಕ್ಕೆ ಪ್ರತ್ಯಕ್ಷ ಇಲ್ಲವೆ ಪರೋಕ್ಷವಾಗಿ ಸಹಾಯ ಮಾಡಿದ ಸ್ನೇಹಿತರು, ನಿರ್ದೇಶಕರು, ಸದಸ್ಯರು, ಶಿಕ್ಷಕ/ಶಿಕ್ಷಕಿಯರು, ಪಾಲಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮಕ್ಕಳು ಹಾಗೂ ಊರಿನ ಗಣ್ಯರು ನಮ್ಮ ಸಂಸ್ಥೆಯ ಎಲ್ಲ ಹಿತೈಷಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸ ಬಯಸುತ್ತೆನೆ.
೧೯೯೮ ರ ಜೂನ ೨೮ ರಂದು ನಿಡಗುಂದಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಂಪ್ಯೂಟರ ತರಬೇತಿ ಕೇಂದ್ರವನ್ನು ಪ್ರಾರಂಬಿಸಲಾಯಿತು. ನಂತರ ಅಗಷ್ಟ-೧೯೯೯ರಿಂದ ಕರ್ನಾಟಕ ಸರಕಾರದ ಕೌಶಲ್ಯ ತರಬೇತಿ ಯೋಜನೆಯಡಿ ಕೈಗಾರಿಕಾ ತರಬೇತಿ ಕೇಂದ್ರವನ್ನು ಪ್ರಾರಂಭಮಾಡಲಾಯಿತು. ಸದ್ಯ ಕಂಪ್ಯೂಟರ, ಇಲೆಕ್ಟಿçÃಕಲ್ ಮತ್ತು ಫಿಟ್ಟರ್ ಈ ವೃತ್ತಿ ವಿಭಾಗಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
ನಮ್ಮ ಸಂಸ್ಥೆಯು ೨೦೧೦-೧೧ ಶೈಕ್ಷಣಿಕ ಸಾಲಿನಿಂದ ಪದವಿ ಪೂರ್ವ ಮಹಾವಿದ್ಯಾಲಯವನ್ನು ಪ್ರಾರಂಬಿಸಿ ಇದರಲ್ಲಿ ಕಲೆ ಮತ್ತು ವಾಣಿಜ್ಯ ವಿಭಾಗವನ್ನು ಪ್ರಾರಂಭ ಮಾಡಲಾಯಿತು. ಸದ್ಯ ವಿಜ್ಞಾನ ವಿಭಾಗವನ್ನು ೨೦೨೪-೨೫ನೇ ಸಾಲಿನಿಂದ ಪ್ರಾರಂಭಮಾಡುತ್ತಿದ್ದೇವೆ.
೨೦೧೧-೧೨ನೇ ಶೈಕ್ಷಣಿಕ ಸಾಲಿನಿಂದ “ಬನಶಂಕರಿ ಪಬ್ಲೀಕ್ ಶಾಲೆ” ಎಂಬ ಹೆಸರಿನಿಂದ ಪೂರ್ವ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಮಾಡಲಾಯಿತು. ಸದ್ಯ ನಮ್ಮ ಶಾಲೆಯಲ್ಲಿ ರ‍್ಸರಿಯಿಂದ ೧೦ ನೇ ತರಗತಿಯವರೆಗೆ ಇಂಗ್ಲೀಷ ಮಾದ್ಯಮದಲ್ಲಿ ಶಾಲೆಯು ನಡೆಯುತ್ತಿದೆ.
ಗ್ರಾಮೀಣ ಮಟ್ಟದಲ್ಲಿ ನಮ್ಮ ಪೂರ್ವ ಪ್ರಾಥಮಿಕದಿಂದ ಪಿ.ಯು.ಸಿ ಯವರೆಗೆ ಕಲಿಯುತ್ತಿರುವ ನಮ್ಮ ಸಂಸ್ಥೆಯ ಎಲ್ಲಾ ಮಕ್ಕಳಿಗೆ ಒತ್ತಡ ರಹಿತ ಬೋದನಾ ಪದ್ದತಿ, ವೈಯಕ್ತಿಕ ಕಾಳಜಿ ಹಾಗೂ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆಯನ್ನು ನೀಡುವದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ.
ನಿರಂತರವಾಗಿ ಪ್ರತಿ ಶೈಕ್ಷಣಿಕ ರ‍್ಷದಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ವಿಶೇಷ ಉಪನ್ಯಾಸ ಕರ‍್ಯಕ್ರಮ, ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣ, ನೈತಿಕ ಶಿಕ್ಷಣಕ್ಕೆ ಒತ್ತು ಕೊಟ್ಟು ಜೊತೆಗೆ ಶಿಕ್ಷಕರಿಗು ಸಹಿತ ನಿರಂತರ ತರಬೇತಿ ಕರ‍್ಯಕ್ರಮವನ್ನು ನಮ್ಮ ಸಂಸ್ಥೆಯು ಹಮ್ಮಿಕೊಳಲಾಗುತ್ತಿದೆ.
ಗ್ರಾಮೀಣ ಮಟ್ಟದಲ್ಲಿ ವಿವಿಧ ಸೇವಾ ಕರ‍್ಯಗಳನ್ನು, ಕೌಶಲ್ಯ ತರಬೇತಿಯನ್ನು ಹಾಗೂ ನಿರಂತರವಾಗಿ ವಿವಿಧ ಚಟುವತಿಕೆಗಳನ್ನು ಹಮ್ಮಿಕೊಂಡು ಸಮಾಜ ಸುಧಾರನೆಗೆ ಬೇಕಾದ ಕೆಲಸಗಳನ್ನು ನಮ್ಮ ಸಂಸ್ಥೆಯಿಂದ ಮಾಡುತ್ತಿದ್ದೇವೆ.
